=== ಬಾಲ್ಯ ಜೀವನ === ಮೇ ೨೩ರಂದು ಕನ್ನಡ ಸಾಹಿತ್ಯ ಲೋಕದ ಹಿರಿಯ ಲೇಖಕಿ ಉಷಾ ಪಿ ರೈ ಅವರ ಹುಟ್ಟಿದ ಹಬ್ಬ. ಕನ್ನಡ, ತುಳು, ಇಂಗ್ಲಿಷ್ ಭಾಷೆಗಳಲ್ಲಿ ಬರಹಗಳಲ್ಲದೆ ಉಷಾ ಅವರು ಚಿತ್ರಕಲೆಗಳಂತಹ ವಿಭಿನ್ನ ಕಲಾಮಾಧ್ಯಮಗಳಲ್ಲಿ ಕೂಡಾ ಪರಿಣತಿ ಸಾಧಿಸಿದವರು. ಬ್ಯಾಂಕಿನ ಜವಾಬ್ದಾರಿಯುತ ಕಾರ್ಯ ನಿರ್ವಹಣೆಗಳ ಜೊತೆ ಜೊತೆಗೆ ಅವರ ಸಾಹಿತ್ಯ.ಕಲಾಭಿರುಚಿ.ಸಮಾಜ ಸೇವೆ ಮತ್ತು ಸಂಘಟನಾ ಚತುರತೆಗಳು ಹೆಸರುವಾಸಿಯಾಗಿವೆ. ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿಯಲ್ಲಿ ಮೇ ೨೩, ೧೯೪೫ರಲ್ಲಿ ಜನಿಸಿದ ಉಷಾ ಎಂ.ಎ. ಪದವೀಧರೆ. ತಂದೆ ಸ್ವಾತಂತ್ರö್ಯ ಹೋರಟಗಾರ ಹಾಗೂ ನವಯುಗ ಪತ್ರಿಕೆಯ ಸಂಪಾದಕ ಹಿರಿಯ ಪತ್ರಕರ್ತರಾದ ದಿ. ಕೆ ಹೊನ್ನಯ್ಯ ಶೆಟ್ಟಿ ಮತ್ತು ತಾಯಿ ಕೆ. ಪದ್ಮಾವತಿ ಶೆಟ್ಟಿ. ಪತಿ ಪ್ರಭಾಕರ ರೈಯವರು ಕೂಡಾ ತುಳು ಮತ್ತು ಕನ್ನಡ ಲೇಖಕ. === ಸಾಧನೆ === ಉಷಾ ಪಿ ರೈ ಅವರಿಗೆ ಅಭಿಮಾನಿಗಳು ಅರ್ಪಿಸಿದ ‘ಸಮೃದ್ದಿ’ ಅಭಿನಂದನಾ ಗ್ರಂಥ ಬಿಡುಗಡೆ ಸಂದರ್ಭದಲ್ಲಿ ಹಿರಿಯ ಬರಹಗಾರ್ತಿ ಕಮಲ ಹಂಪನಾ “ಬರಹಗಾರರ ಬದುಕು ಹಾಗೂ ಬರಹಗಳು ಪ್ರಾಮಾಣಿಕ. ಪಾರದರ್ಶಕ ಹಾಗೂ ವಸ್ತುನಿಷ್ಠವಾಗಿರಬೇಕು. ಇದನ್ನು ಸಾಹಿತಿ ಕೆ.ಉಷಾ ಪಿ.ರೈ ಅವರ ಬರಹಗಳಲ್ಲಿ ಕಾಣಬಹುದಾಗಿದೆ. ಉಷಾ ಅವರು ತಮ್ಮ ಬದುಕಿನಲ್ಲಿ ಏನನ್ನು ಕಂಡಿದ್ದಾರೆ. ಅದನ್ನು ತಮ್ಮ ಬರಹ ಹಾಗೂ ಚಿತ್ರಕಲೆಯಲ್ಲಿ ಹೇಳಿದ್ದಾರೆ. ಇಂತಹ ಗುಣ ಪ್ರತಿಯೊಬ್ಬ ಲೇಖಕರು ಬೆಳೆಸಿ ಕೊಳ್ಳಬೇಕಾದ ಅವಶ್ಯಕತೆ ಇದೆ” ಎಮದು ನುಡಿದ ಮಾತುಗಳು ಉಷಾ ಅವರ ಸಾಧನೆಗೆ ಹಿಡಿದ ಕನ್ನಡಿಯಂತಿದೆ. ಉಷಾ ಪಿ.ರೈ ಅವರ ಇಪ್ಪತ್ತಕ್ಕೂ ಹೆಚ್ಚು ಕೃತಿಗಳು ಪ್ರಕಟಗೊಂಡಿವೆ. ಉಷಾ ಅವರ ಮೊದಲ ಕಾದಂಬರಿ “ಅನುಬಂಧ”. ೧೯೭೪ರಲ್ಲಿ ಪ್ರಜಾಮತ ವಾರ ಪತ್ರಿಕೆಯಲ್ಲಿ ಧಾರವಾಹಿಯಾಗಿ ಪ್ರಕಟವಾಯ್ತು. ನಂತರ ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಉಷಾ ಅವರ ಹನಿಗವನಗಳು, ಕಾದಮಬರಿಗಳು, ಸಣ್ಣ ಕಥೆಗಳು, ಪ್ರವಾಸ ಕಥನ, ಲೇಖನಗಳು, ಚಿಂತನಗಳು ಪ್ರಕಟಗೊಂಡಿವೆ. === ಕಾದಂಬರಿ === ಪರಿಭ್ರಮಣ, ಅನುಬಂಧ, ಉತ್ತರಣ, ಸುಪ್ತಸ್ವರ, ನಿಶಾನೆ, ಜಾಗೃತಿ, ನಿಯತಿ === ಪ್ರಸಿದ್ದ ಕತೆಗಳು === ಕನಸುಗಳು ನನಸುಗಳು, ಹಕ್ಕಿ ಮತ್ತು ಗಿಡುಗ, ಊರುಕೋಲು (ತುಳುವಿನಲ್ಲಿ) ಬದುಕೆಂಬ ಚದುರಂಗದಾಟದ ದಾಳಗಳು, ಒಂದೇ ದೋಣಿಯ ಪ್ರಯಾಣಿಕರು, ಆಂತರ್ಯ === ಸಣ್ಣ ಕಥೆಗಳು ಮತ್ತು ಪ್ರವಾಸ ಕಥನಗಳು === ಲಕ್ಷದ್ವಿಪಕ್ಕೆ ಲಗ್ಗೆ ಇಟ್ಟಾಗ ಅವರ ಪ್ರವಾಸ ಕಥನ. ಉಷಾ ಅವರ ಸಂಪಾದಿತ ಕೃತಿಗಳಲ್ಲಿ ‘ನವಯುಗದ ಪ್ರವರ್ತಕ’, ‘ಲೇಖಕಿ’, ‘ಲೇಖಲೋಕ’, ‘ಲೇಖಕಿಯರ ಸಣ್ಣ ಕಥೆಗಳು’, ‘ಎಪ್ಪತ್ತರ ವಯಸ್ಸು ಇಪ್ಪತ್ತರ ಮನಸು’, ‘ತುಳು ಕಬಿತೆಲು’, ಬೊಕ್ಕ ಗಾದೆಲು’ ಪ್ರಮುಖವಾಗಿವೆ. === ಪ್ರಶಸ್ತಿಗಳು === ಸಾಹಿತ್ಯಲೋಕದಲ್ಲಷ್ಟೆ ಅಲ್ಲದೆ ಚಿತ್ರಕಲಾವಿದರಾಗಿ ಸಹಾ ಉಷಾ ಪಿ ರೈ ಅವರ ಪ್ರತಿಭೆ ಹೊರಹೊಮ್ಮಿದ್ದು ಅವರ ಚಿತ್ರಗಳು ಅನೆಕ ಪ್ರತಿಷ್ಟಿತ ತಾಣಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆಗಳಿಸಿವೆ. ಉಷಾ ಅವರಿಗೆ ಹಲವಾರು ಗೌರವಗಳು ಪ್ರಾಪ್ತವಾಗಿದ್ದು, ಅತ್ತಿಮಬ್ಬೆ ಗೊರೂರು ಪ್ರತಿಷ್ಠಾನ ಸುವರ್ಣ ಸ್ವಾತಂತ್ರೊö್ಯವ ಸನ್ಮಾನ, ಕುರುಂಜಿ ವೆಂಕಟರಮಣ ಪ್ರತಿಭಾ ಪುರಸ್ಕಾರ, ವಿಜಯಾ ಬ್ಯಾಂಕ್ ಕನ್ನಡ ಸಂಘದ ಗೌರವ, ಸಾಹಿತ್ಯ ಪರಿಷತ್ತಿನ ನೀಲಗಂಗಾ ದತ್ತಿನಿಧಿ ಬಹುಮಾನ, ಅಮ್ಮ ಪ್ರಶಸ್ತಿ. ಬಲಿಯೇಂದ್ರ ಪುರಸ್ಕಾರಗಳು ಪ್ರಮುಖವಾಗಿದೆ. ಹಲವಾರು ಕವಿಗೋಷ್ಠಿಗಳಲ್ಲಿ, ಸಾಹಿತ್ಯ ಸಮ್ಮೆಳನಗಳಲ್ಲಿ ಭಾಗವಹಿಸಿರುವ ಉಷಾ ಪಿ ರೈ ಅವರು ಸ್ತಿತ್ರಿ ಕಾರ್ಯಕ್ರಮಗಳ ಮೂಲಕ ಸ್ತಿತ್ರಿಯರಿಗೆ ಸಂಬಂಧಪಟ್ಟ ಸಮಸ್ಯೆಗಳ ಬಗ್ಗೆ ವ್ಯಾಪಕವಗಿ ಚರ್ಚಿಸಿದ್ದಾರೆ. ಐದು ವರ್ಷ ಕರ್ನಾಟಕ ಲೇಖಕಿಯರ ಸಂಘದ ಸಮರ್ಥ ಅಧ್ಯಕ್ಷಿಣಿಯಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯ ಕೃಷಿಯ ಜೊತೆಗೆ ‘ಮಹಿಳಾ ದಕ್ಷತಾ ಸಮಿತಿ’ ಮತ್ತು ‘ವನಿತಾ ಸಹಾಯವಾಣಿ’ ಕೇಂದ್ರ ಮುಂತಾದ ಅನೇಕ ಸಮಾಜ ಸೇವಾ ಸಂಸ್ದೆಗಳಲ್ಲಿ ಅವರ ಸೇವೆ ಸಲ್ಲುತ್ತಾ ಸಾಗಿದೆ. ಹೀಗೆ ವಿಭಿನ್ನ ನೆಲೆಗಳಲ್ಲಿ ಮಹತ್ವದ ಸೇವೆ ಸಲ್ಲಿಸಿ ಸಕಲರಿಗೂ ಆದರ್ಶಪ್ರಾಯರಾಗಿ ಸ್ನೆಹ ಜೀವಿಯಾಗಿರುವರು ಉಷಾ ಪಿ.ರೈ.